ಸ್ಮಾರ್ಟ್ ಹೌಸದ ಬುಟ್ಟಿ ಜಪಾನಿನ ಮಿನೋರು ಕುಲಾಟಾ ಎಂಬ ಯುವ ತಂತ್ರಜ್ಞಾನಿ ಒಂದು ಬುದ್ದಿವಂತ ಕಸದ ಬುಟ್ಟಿಯನ್ನು ರೂಪಿಸಿದ್ದಾನೆ . ಈ ಕಸದ ಬುಟ್ಟಿತಾನಾಗಿ ಕಸವನ್ನು ಬಾಚುವುದಿಲ್ಲ ಆದರೆ ತನ್ನ ಹತ್ತಿರದಲ್ಲಿ ಯಾರಾದರೂ ಕಸ ಎಸೆದರೆ ಅದನ್ನು ಅಟ್ಟಿಸಿಕೊಂಡು ಹೋಗಿ ತನ್ನೊಳಗೆ . ಬೀಳುವಂತೆ ಮಾಡುತ್ತದೆ ! ಈ ಕಸದ ಬುಟ್ಟಿಯ ಸಹಾಯಕ್ಕಾಗಿ ಕೋಣೆಯ ಸುತ್ತ ಚಲನೆಯನ್ನು ಗುರುತಿ ಸುವಕಿನೆಕ್ಸ್ಎಂಬ ಕ್ಯಾಮೆರಾಗಳನ್ನು ಜೋಡಿಸಲಾಗುತ್ತದೆ . ಎಲ್ಲಾದರೂ ಕಸ ಬೀಳುತ್ತಿದ್ದರೆ ಇದು ಕಂಪ್ಯೂಟರ್‌ಗೆಸಂದೇಶ ಕಳಿಸುತ್ತದೆ . ಕಂಪ್ಯೂಟರ್ ತತ್‌ಕ್ಷಣ ಕಸ ಬೀಳುತ್ತಿರುವ ಜಾಗ ಮತ್ತು ವೇಗವನ್ನು ಲೆಕ್ಕ ಹಾಕಿ ಕಸದ ಬುಟ್ಟಿಗೆ ಸಂದೇಶ ಕಳಿಸುತ್ತದೆ . ಕಸದ ಬುಟ್ಟಿಯ ತಳಭಾಗದಲ್ಲಿ ಬ್ಯಾಟರಿ ಚಾಲಿತ ಮೋಟರ್ ಮತ್ತು ಚಕ್ರಗಳಿರುತ್ತವೆ . ಕಂಪ್ಯೂಟರ್‌ನಿಂದ ನಿಸ್ತಂತು ಸಂದೇಶ ಬರುತ್ತಲೇ ಇದು ವೇಗವಾಗಿ ಚಲಿಸಿ , ಬೀಳುತ್ತಿರುವ ಕಸದ ಕೆಳಗೆ ನಿಂತು , ಅದು ತನ್ನೊಳಗೆ ಬೀಳುವಂತೆ ನೋಡಿಕೊಳ್ಳುತ್ತದೆ . ಈ ವರ್ಷ ಫೆಬ್ರವರಿಯಲ್ಲಿ ಟೋಕಿಯೊದಲ್ಲಿ ನಡೆದಿದ್ದ ಜಪಾನ್ ಮೀಡಿಯಾ ಆರ್ಟ್ಸ್ ಫೆಸ್ಟಿವಲ್ ಎಂಬ ಮೇಳದಲ್ಲಿ ಈ ಆವಿಷ್ಕಾರಕ್ಕೆ ಬಹುಮಾನ ಸಿಕ್ಕಿತ್ತು . ಈ ಸ್ಮಾರ್ಟ್ ಕಸದ ಬುಟ್ಟಿಯನ್ನು ತಯಾರಿಸಲು ಇದಾಗಲೇ ಹಲವಾರು ಸಂಸ್ಥೆಗಳು ತಯಾರಾಗಿವೆ .
0 Comments