Ad Code

ಭಾರತದ ಸುತ್ತ ನವರಾತ್ರಿ, ದಸರೆ


ಭಾರತದ ಸುತ್ತ ಭಾರತದ ಉದ್ದಗಲಗಳಲ್ಲಿ ನವರಾತ್ರಿ ಮತ್ತು ವಿಜಯದಶಮಿ ಹಬ್ಬವನ್ನು ಸಂಭ್ರಮ ದಿಂದ ಆಚರಿಸಲಾಗುತ್ತದೆ. ಒಂದೊಂದು ಪ್ರಾಂತದ ಹಬ್ಬಕ್ಕೆ ಒಂದೊಂದು ಸೊಬಗು. ರಾಮಲೀಲಾ ಭಾರತದ ವಿಭಿನ್ನಭಾಗಗಳಲ್ಲಿ ದಸರೆಯನ್ನು ಹೇಗೆ ಆಚರಿಸಲಾಗುತ್ತದೆ ಎಂದು ಓದಿ...

ದೆಹಲಿ
ಹರ್ಯಾಣಾ, ಪಂಜಾಬ್, ಉತ್ತರ ಪ್ರದೇಶ, ಬಿಹಾರ, ಮಧ್ಯ ಪ್ರದೇಶ ಮುಂತಾದ ಉತ್ತರಭಾರತದ ಹೆಚ್ಚಿನ ಭಾಗಗಳಲ್ಲಿ ದಸರೆ ಎಂದರೆ ಶ್ರೀರಾಮ ಲಂಕಾಸುರನನ್ನು ವಧಿಸಿ, ಯುದ್ಧ ಗೆದ್ದ ದಿನ ರಾಜಧಾನಿ ದೆಹಲಿಯಲ್ಲೂ ಇದೇ ರೀತಿ ಶ್ರೀರಾಮನ ಉತ್ಸವವಾಗಿ ದಸರೆಯನ್ನು ಆಚರಿಸುತ್ತಾರೆ.
ದೆಹಲಿಯ ಶ್ರೀರಾಮ ದೇವಾಲಯ ಗಳಲ್ಲಿ ನವರಾತ್ರಿಯ ವೇಳೆ ವಿಶೇಷ ಉತ್ಸವ ನಡೆಯುತ್ತದೆ. ಅಲ್ಲಲ್ಲಿ ಮೈದಾನಗಳಲ್ಲಿ ರಾಮಲೀಲಾ ಎಂಬ ಸಂಗೀತ ನಾಟಕದ ಗರ್ಬಾನೃತ್ಯ ಪ್ರದರ್ಶನ ನಡೆಯುತ್ತದೆ.

ರಾಮಲೀಲಾ ಮೈದಾನಗಳಲ್ಲಿ ರಾವಣ, ಕುಂಭಕರ್ಣ ಮತ್ತು ಮೇಘನಾದ (ಇಂದ್ರಜಿತುರ ದೈತ್ಯಾಕಾರದ ಗೊಂಬೆ ಗಳನ್ನು ಇರಿಸಲಾಗುತ್ತದೆ. ಇವುಗಳ ಒಳಗೆ ಸಿಡಿಮದ್ದುಗಳಿರುತ್ತವೆ. ವಿಜಯದಶಮಿಯ ದಿನ ರಾಮನ ಪಾತ್ರಧಾರಿ ಇವುಗಳತ್ತ ಸಾಂಕೇತಿಕವಾಗಿ ಬಾಣ ಎಸೆಯುತ್ತಾನೆ. ಮರುಕ್ಷಣವೇ ಮೂರೂ ಗೊಂಬೆಗಳು ಉರಿದು, ಸಿಡಿಮದ್ದುಗಳ ಸ್ಫೋಟದೊಡನೆ ಸುಟ್ಟುಹೋಗುತ್ತವೆ. ಅನಂತರ ಆಕಾಶಕ್ಕೆ ರಂಗಿನ ಬೆಳಕು ಚೆಲ್ಲುವಂತೆ ಭರ್ಜರಿ ಸಿಡಿಮದ್ದುಗಳ ಉತ್ಸವ ನಡೆಯುತ್ತದೆ.

ಗುಜರಾತ್
   ದೇಶದಲ್ಲೇ ಸಂಭ್ರಮದ ನವರಾತ್ರಿ ಉತ್ಸವ ನಡೆಯುವುದು ಗುಜರಾತ್‌ನಲ್ಲಿ ನವರಾತ್ರಿಯ ಮೊದಲ ದಿನ ಬೀದಿ, ಬೀದಿಗಳಲ್ಲಿ ಅಂಬಾದೇವಿಯ ಪ್ರತೀಕವಾಗಿ ಗರ್ಭಾ ದೀಪ್ ಎಂಬ ಜ್ಯೋತಿಯನ್ನುಉರಿಸಿ, ಒಂಬತ್ತು ದಿನಗಳ ಕಾಲ ದೇವಿಯ ಹಾಡು ಹಾಡುತ್ತ ಅದಕ್ಕೆ ಪೂಜೆ ಸಲ್ಲಿಸುತ್ತಾರೆ. ನರ್ತಿಸುತ್ತ ಅದರ ಸುತ್ತ ವೃತ್ತಾಕಾರದಲ್ಲಿ ಪ್ರದಕ್ಷಿಣೆ ಬರುತ್ತಾರೆ.
 ನವರಾತ್ರಿಯ ನೃತ್ಯದಲ್ಲಿ ಗರ್ಭಾ ಮತ್ತು ದಾಂಡಿಯಾ ರಾಸ್ ಎಂಬ ಎರಡು ವಿಧಗಳಿವೆ. ಹೆಂಗಳೆಯರು ಆಕರ್ಷಕ ಬಣ್ಣಗಳ ಚನಿಯಾ ಚೋಲಿ ಅಥವಾ ಘಾಘ್ರಾ ಚೋಲಿ ಎಂಬ ಉಡುಪನ್ನು ತೊಟ್ಟು ಆಭರಣಗಳನ್ನು ಧರಿಸಿ ಚಪ್ಪಾಳೆ ತಟ್ಟುತ್ತ ತಿರುಗುವನೃತ್ಯ ಗರ್ಬಾ. ದಾಂಡಿಯಾ ರಾಸ್ ಎಂದರೆ ಕೋಲಾಟದ ನೃತ್ಯ.

ಮೈಸೂರಿನ ದಸರೆ
  ಮೈಸೂರು ದೇಶವಿದೇಶಗಳಲ್ಲಿ ಸುಪ್ರಸಿದ್ಧವಾಗಿರುವುದು ದಸರೆಯ ಮೆರವಣಿಗೆಗಾಗಿ, ಇಲ್ಲಿನ ಮಹಿಷಾಸುರ ಮರ್ದಿನಿಯ ಉತ್ಸವ ಮತ್ತು ದಸರೆಯ ಮೆರವಣಿಗೆಗೆ 4 ಶತಮಾನಗಳ ಭವ್ಯ ಇತಿಹಾಸಇದೆ.

ನವರಾತ್ರಿ ಮತ್ತು ವಿಜಯದಶಮಿಯ ಹತ್ತುದಿನಗಳ ಕಾಲ ಮೈಸೂರು ಅರಮನೆ ಲಕ್ಷಾಂತರ ದೀಪಗಳ ಅಲಂಕಾರದಲ್ಲಿ ಜಗಮಗಿಸುತ್ತದೆ. ದಶಮಿಯ ದಿನ ಮೈಸೂರಿನ ಬೀದಿಗಳಲ್ಲಿ ಸಾಗುವ ಆನೆ, ಕುದುರೆ, ಸಾರೋಟುಗಳ ಭವ್ಯ ಮೆರವಣಿಗೆಯ ವೈಭವಕ್ಕೆ ಸಾಟಿಯೇ ಇಲ್ಲ,

ಛತ್ತೀಸ್‌ಗಡ

ಛತ್ತೀಸ್‌ಗಡದ ಬಸ್ತಾರ್ ಪ್ರದೇಶದ ಆದಿವಾಸಿಗಳ ದಸರಾ ಎಂದರೆ ಶ್ರೀ ದೇವಿ ಮೌಳಿಯ ಉತ್ಸವ, ಅಕ್ಟೋಬರ್ನವೆಂಬರ್ ತಿಂಗಳ ನಡುವೆ ಶ್ರಾವಣದ ಅಮವಾಸ್ಯೆಯಿಂದ ಆರಂಭವಾಗಿ75 ದಿನಗಳ ಕಾಲ ನಡೆಯುವ ಹಬ್ಬಇದು! ಕಳೆದ ಐದು ಶತಮಾನಗಳಿಂದ ಸಂಪ್ರದಾಯಬದ್ದವಾಗಿನಡೆದು ಬಂದಿರುವ ಉತ್ಸವ ಇದು.

Post a Comment

0 Comments