ಒಂದು ಕಾಡಿನಲ್ಲಿ ಒಂದು ಕತ್ತೆ ಇತ್ತು. ಅದರ ಜೊತೆಗೆ ಒಂದು ನರಿ ಇತ್ತು.
ಅವೆರಡೂ ಸ್ನೇಹಿತರು. ಅವು ದಿನಾ ಯಾವುದಾದರೂ ತೋಟಕ್ಕೆ ಹೋಗಿ ಅಲ್ಲಿನ ಬೆಳೆಗಳನ್ನು ತಿಂದು ಬರುತ್ತಿದ್ದವು. ಅವು ಒಂದು ದಿನ ಒಂದು ಬಟಾಣಿಯ ತೋಟಕ್ಕೆ ನುಗ್ಗಿದವು.
ಬಟಾಣಿಗಳು ರುಚಿಯಾಗಿದ್ದವು. ಅವುಗಳ ಆನಂದಕ್ಕೆ ಪಾರವೇ ಇರಲಿಲ್ಲ ಕತ್ತೆ ಗಟ್ಟಿಸ್ವರದಲ್ಲಿ ಬಟಾಣಿಯ ವರ್ಣನೆ ಮಾಡತೊಡಗಿತು. ಇದರಿಂದನರಿಗೆ ಬಹಳ ಹೆದರಿಕೆ ಆಯಿತು. ತೋಟದ ಮಾಲೀಕನು ಇಲ್ಲೇ ಎಲ್ಲೋ ಇರಬಹುದು, ಸ್ವಲ್ಪ ಸಾವಕಾಶವಾಗಿಹೇಳು ಎಂದು ಕತ್ತೆಗೆ ಹೇಳಿತು. ಕತ್ತೆ ಅದರ ಮಾತಿಗೆ ಕಿವಿ ಕೊಡಲಿಲ್ಲ. ಅಷ್ಟರಲ್ಲಿ ತೋಟದ ಮಾಲೀಕ ಕೋಲು ಹಿಡಿದುಕೊಂಡು ಅಲ್ಲಿಗೆ ಬಂದೇ ಬಿಟ್ಟನು. ನರಿ ಅವನನ್ನು ನೋಡಿ ಅಲ್ಲಿಂದ ಓಡಿ ಪಾರಾಯಿತು. ಮೂರ್ಖ ಕತ್ತೆ ಅವನ ಕೈಗೆ ಸಿಕ್ಕಿತು. ಅವನು ಅದನ್ನು ಹೊಡೆದು, ಬಡಿದು ಅರಜೀವಮಾಡಿದನು. ನೀತಿ: ಮೂರ್ಖರ ಒಡನಾಟ ಸಲದು
0 Comments