೨.ಗಿಡವಾಗಿ ಬಗ್ಗದ್ದು, ಮರವಾಗಿ ಬಗ್ಗೀತೇ?
೩.ಆರುವ ದೀಪಕ್ಕೆ ಕಾಂತಿ ಹೆಚ್ಚು
೪.ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರೀಲಿ ಕೊಡೆ ಹಿಡಿಸಿಕೊಂಡ
೫.ಅಳಿವುದೇ ಕಾಯ ಉಳಿವುದೇ ಕೀರ್ತಿ
೬.ಅಳಿಯ ಅಲ್ಲ ಮಗಳ ಗಂಡ
೭.ಅಡ್ಡ ಗೋಡೆಯ ಮೇಲೆ ದೀಪ ಇಟ್ಟ ಹಾಗೆ
೮.ಆರು ಕೊಟ್ಟರೆ ಅತ್ತೆ ಕಡೆ, ಮೂರು ಕೊಟ್ಟರೆ ಸೊಸೆ ಕಡೆ
೯.ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬರದು
೧೦.ಅಜ್ಜಿಗೆ ಅರಿವೆಯ ಚಿಂತೆ, ಮೊಮ್ಮಗಳಿಗೆ ಕಜ್ಜಾಯದ ಚಿಂತೆ
೧೧.ಅಕ್ಕಿಯ ಮೇಲೆ ಆಸೆ, ನೆ೦ಟರ ಮೇಲೆ ಪ್ರೀತಿ
೧೨.ಅತ್ತೆಗೊ೦ದು ಕಾಲ; ಸೊಸೆಗೊ೦ದು ಕಾಲ
೧೩.ಆಸೆಯೇ ದುಃಖಕ್ಕೆ ಮೂಲ
೧೪.ಅಡಿಗೆ ಬಿದ್ದರೂ ಮೂಗು ಮೇಲೆ
೧೫.ಬೇಲಿನೇ ಎದ್ದು ಹೊಲ ಮೇದ ಹಾಗೆ
೧೬.ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ
0 Comments