Ad Code

ಗುರು ಮತ್ತವರ ಐವರು ಶಿಷ್ಯರು

           ಒಂದಾನೊಂದು ಊರಿನಲ್ಲಿ ಒಬ್ಬ ಗುರು ಇದ್ದ ಉದ್ದನೆ ಬಿಳಿ ಗಡ್ಡ ಇತ್ತವನಿಗೆ . ಮತ್ತೆ ಅಷ್ಟೇ ಉದ್ದದ ಬಿಳಿ ತಲೆಕೂದಲೂ ಇತ್ತು . ಮುಖ ಪೂರ್ತಿ ಸುಕ್ಕುಸುಕ್ಕಾಗಿತ್ತು . ತೆಳ್ಳಗೆ ಉದ್ದಕ್ಕೆ ಇದ್ದ ಉದ್ದದ ನಿಲುವಂಗಿ ಧರಿಸ್ತಾ ಇದ್ದ , ಇವನ ರೂಪ ನೋಡಿದ್ರೆ ಎಷ್ಟೋ ವಯಸ್ಸಾಗಿ , ತುಂಬಾ ಬುದ್ಧಿವಂತ ಇರಬೇಕು ಅನ್ನಿಸ್ತಾ ಇತ್ತು . ಬುದ್ಧಿವಂತ ಏನೋ ಆಗಿದ್ದ ಆದ್ರೆ ಅಂಥ ದೊಡ್ಡ ವಯಸ್ಸೇನೂ ಆಗಿರಲಿಲ್ಲ ಅನ್ನು ! ಇವನತ್ರ ಐದು ಮಂದಿ ಶಿಷ್ಯರು ಕಲಿತಾ ಇದ್ರು . ಶಿಷ್ಯರೋ ಐದು ಮಂದಿ ಐದು ಥರ ಇದ್ರು . ಮೊದಲನೆಯವನು ತೀರಾ ಸಪೂರಕ್ಕಿದ್ದ ಎಷ್ಟು ಸಪೂರ ಅಂದರೆ ತೆಳ್ಳಗಿದ್ದ , ಅಂದ್ರೆ ಜನ ಅವನನ್ನ ಮಡೀಕೋಲು ಅಂತ ಕರೀತಾ ಇದ್ರು ಮಡೀಕೋಲು ಅಂದ್ರೆ ಏನು ಗೊತ್ತಾ ? ಹಿಂದಿನ ಕಾಲದಲ್ಲಿ ಒಗೆದ ಬಟ್ಟೆಗಳನ್ನ ಒಣಗಿಸೋಕೆ ಉದ್ದದ , ಸಪೂರದ ಕೋಲು ಉಪಯೋಗಿಸ್ತಾ ಇದ್ರು . ಇದಕ್ಕೆ ಮಡೀಕೋಲು ಅನ್ತಾ ಇದ್ರು . ತೀರಾ ತೆಳ್ಳಗೆ ಇರೋವರನ್ನ ನೋಡಿದ್ರೆ , “ ಏನಪ್ಪಾ ಮಡೀಕೋಲಿದ್ದ ಹಾಗಿದಾನೆ ' ಅನ್ತಾ ಇದ್ರು . ಮಡೀಕೋಲು ಮುಂದೆ ತನ್ನ ಗುರುಗಳ ಹಾಗೆ ಆಗಬೇಕು ಅಂತ ನಿರ್ಧರಿಸಿದ್ದ ಗುರುಗಳೂ ಅವನನ್ನ ತಮ್ಮ ಪಟ್ಟಶಿಷ್ಯನನ್ನಾಗಿ ತಯಾರು ಮಾಡ್ತಾ ಇದ್ರು . ಎರಡನೆಯವ ಗುಂಡುಗುಂಡಾಗಿ ಒಳ್ಳೆ ಕುಂಬಳಕಾಯಿಯ ಹಾಗಿದ್ದ ಅವನ ಬಣ್ಣವೂ ಹಾಗೇ ಇತ್ತು . ಜನರು ಇವನನ್ನ ಕುಂಬಳಪ್ಪ ಅಂತ ಕರೀತಾ ಇದ್ರು . ಅವನು ಗಣಿತಶಾಸ್ತ್ರದಲ್ಲಿ ಆಸಕ್ತಿ ಹೊಂದಿದ್ದು ಅದರಲ್ಲಿ ತಕ್ಕಮಟ್ಟಿಗೆ ಪರಿಣತಿಯೂ ಇತ್ತು . ಇನ್ನು ಮೂರನೆಯವ ಸಣ್ಣ ಗಾತ್ರದವನಾಗಿದ್ದ . ಅಂದ್ರೆ ತುಂಬಾ ಕುಳ್ಳಗಿದ್ದ , ಆದ್ರೂ ಉರುಟುರುಟಾಗಿದ್ದ ಜನರು ಅವನನ್ನ ಮೋಟು ಮಾಣಿ ಅಂತಿದ್ರು . ಅವನು ನಡೆಯುತ್ತಾ ಇದ್ರೆ , ಉರುಳ್ತಾ ಇದಾನೋ ಅನಸ್ತಿತ್ತು . ಕೆಲವರು ಅವನನ್ನ ಗೋಟಡಿಕೆ ಅನ್ನೋದೂ ಇತ್ತು . ಇವನು ಇವರ ಗುಂಪಿನ ವೈದ್ಯನಾಗಿದ್ದ ಗಿಡಮೂಲಿಕೆ , ಸೊಪ್ಪುಸದೆಗಳಲ್ಲಿ ಇರುವ ಔಷಧದ ಗುಣಗಳನ್ನು ಗುರುತಿಸುವ ಕಲೆ ಇವನಲ್ಲಿತ್ತು . ಒಟ್ಟಿನಲ್ಲಿ ಇವನು ಗುಂಪಿಗೆ ಮತ್ತು ಊರವರಿಗೆವೈದ್ಯನಾಗಿದ್ದ ನಾಲ್ಕನೆಯವ ಭೀಮಸೇನನ ಹಾಗಿದ್ದ ದಷ್ಟಪುಷ್ಟವಾಗಿದ್ದ ಬಡಗಿಯ ಕೆಲಸಾಂದ್ರೆ ಇವನಿಗೆ ಎಲ್ಲಿಲ್ಲದ ಆಸಕ್ತಿ . ಮರದಲ್ಲಿ ಚೆಂದದ ಕೆತ್ತನೆ ಮಾಡ್ತಾ ಇದ್ದ ಜನರು ಇವನನ್ನು ದೂಡ್ರಾಯ ಅಂತ ಇದ್ದರು . ಐದನೆಯವ ತೀರಾ ಸರಳ ಸಜ್ಜನ ವನನ್ನ ಮಂದಿ ಭೋಲಾರಾಯ ಅಂತಿದ್ರು . ಮುಳಿಹುಲ್ಲಿನ ಛಾವಣಿಯ ಚೆಂದದ ಗುಡಿಸಲಿನಲ್ಲಿ ಈ ಆರು ಮಂದಿ ವಾಸಿಸುತ್ತಿದ್ದರು . ಒಬ್ಬೊಬ್ಬರೂ ಒಂದೊಂದು ಕೆಲಸ ಹಂಚಿಕೊಂಡಿದ್ದರು . ಗುರು ಹಗ್ಗದ ಮಂಚದ ಮೇಲೆ ಮಲಗುತ್ತಿದ್ದ ಶಿಷ್ಯರು ಅವನ ಸುತ್ತ ಚಾಪೆ ಹಾಸಿಕೊಂಡು , ಉಣ್ಣೆಯ ಕಂಬಳಿ ಹೊದ್ದು ಮಲಗುತ್ತಿದ್ದರು . ಗುರು ಮನೆಯಲ್ಲಿದ್ದ ಒಂದೇ ಒಂದು ಕುರ್ಚಿಯ ಮೇಲೆ ಕುಳಿತು ಶಿಷ್ಯರಿಗೆ ಪಾಠ ಹೇಳುತ್ತಿದ್ದ ಶಿಷ್ಯರು ಅದೇ ಚಾಪೆಯ ಮೇಲೆ ಕೂತು ಕಲೀತಾ ಇದ್ದರು . ಗುರು ಮುಖ್ಯವಾಗಿ ' ಧರ್ಮ ' ಮಾರ್ಗದಲ್ಲಿ ಹೇಗೆ ಬದುಕುವುದು ಅಂತ ಕಲಿಸುತ್ತಿದ್ದ ಹೀಗಿರುವಾಗ ಗುರುಗಳಿಗೆ ದೂರದ ಊರಿಗೆ ಹೋಗಬೇಕಾಗಿ ಬಂತು , ಗುರುವಿನೊಂದಿಗೆ ಶಿಷ್ಯರೂ ಹೊರಟು ನಿಂತರು .

Post a Comment

0 Comments