ಒಂದು ಚಿರತೆ ಆಹಾರಕ್ಕಾಗಿ ಹೊಂಚು ಹಾಕುತ್ತಿತ್ತು. ಒಂದು ಮೊಲ ಅದರ ಕಣ್ಣಿಗೆ ಬಿತ್ತು. ಇವತ್ತು ನನಗೆ ಒಳ್ಳೆಯ ಭೋಜನ ಸಿಕ್ಕಿದೆ. ನಿನ್ನನ್ನು ಬಿಡಲಾರೆ'' ಎಂದಿತು. ಅಣ್ಣ! ನಾನು ನಿನ್ನ ಆಹಾರವಾಗಲು ಸಿದ್ಧನಾಗಿದ್ದೇನೆ. ಆದರೆ ನನಗೆ ಒಂದೇ ಒಂದ ಆಸ ಇದೆ'' ಎಂದಿತು ಮೂಲ ಏನದು ನಿನ್ನ ಕೊನೆಯ ಆಸೆ?” ಎಂದು ಚಿರತೆ ಕೇಳಿತು. 'ಅಣ್ಣ ನನಗೊಮ್ಮೆ ನಿನ್ನೊಡನೆ ಕಣ್ಣುಮುಚ್ಚಾಲೆ ಆಟವಾಡ ಬೇಕು'' ಎಂದಿತು. ಅದಕ್ಕೆ ಮೂರ್ಖ ಚಿರತೆ ಒಪ್ಪಿಕೊಂಡಿತು.
ಅಣ್ಣ ನೀವು ಮೊದಲು ಕಣ್ಣು ಮುಚ್ಚಿ ನಾನು ಅಡಗಿಕೊಳ್ಳುತ್ತೇನೆ. ನನ್ನನ್ನು ಹುಡುಕಿ'' ಎಂದಿತು ಮೊಲ, ಮೂರ್ಖ ಚಿರತೆ ಕಣ್ಣು ಮುಚ್ಚಿದ ಕೂಡಲೇ ಅದು 'ಬದುಕಿದೆಯೋ ಬಡಜೀವವೇ'' ಎಂದು ಓಡಿ ತನ್ನ ಜೀವ ಉಳಿಸಿಕೊಂಡಿತು. ಚಿರತೆ ತನ್ನ ಮೂರ್ಖತನದಿಂದ ಮೋಸಹೋಯಿತು.
ನೀತಿ: ಉಪಾಯ ಬಲ್ಲವನಿಗೆ ಅಪಾಯವಿಲ್ಲ,
0 Comments